Monday, July 5, 2021

ಶ್ರೀ ಶಿಶುನಾಳ ಶರೀಫ್ ಸಾಹೇಬ

೧೯ ನೇ ಶತಮಾನದಲ್ಲಿ ಆಗಿಹೋದ ಕನ್ನಡದ ಕಬೀರನೆಂದೇ ಹೆಸರುವಾಸಿಯಾದ, ಸಂತ ಶರಣ ಅನುಭಾವಿ ಕವಿ "ಶ್ರೀ ಶಿಶುನಾಳ ಶರೀಫ್ ಸಾಹೇಬ"ರು ಧಾರವಾಡ ಜಿಲ್ಲೆ ಶಿಗ್ಗಾಂವ ತಾಲೂಕು ಶಿಶುವಿನಾಳ ಗ್ರಾಮದಲ್ಲಿ  ದಿನಾಂಕ ೩-೭-೧೮೧೯ ರಲ್ಲಿ  ತಂದೆ ಹಜರತ್ ಇಮಾಮಸಾಹೇಬ್ ತಾಯಿ ಹಜ್ಜುಮಾ ಇವರ ಉದರದಿಂದ ಜನಿಸಿ ಬರುತ್ತಾರೆ.  ಇವರಿಗೆ ”ಮೊಹಮ್ಮದ್ ಶರೀಫ್” ಎಂದು ಹುಲಗೂರು ”ಹಜರೇಶಾ ಖಾದ್ರಿಯವರು ನಾಮಕರಣವನ್ನು  ಮಾಡುತ್ತಾರೆ. ಚರಮೂರ್ತಿಗಳಾದ ಗೋವಿಂದ ಭಟ್ಟರು ಇವರ ಗುರುಗಳು.


      ಇಂದು ಶಿಶುನಾಳ ಶರೀಫ್ ರ ಜನನವಾದ ದಿನ. ಅವರು ಮುಖ್ಯವಾಗಿ ಜಾತಿಭೇದವನ್ನು ಜಾಡಿಸಿ ಒದ್ದು ಹಿಂದೂ-ಮುಸ್ಲಿಂ ಭಾವೈಕ್ಯತೆಗಾಗಿ ತುಂಬಾ ಶ್ರಮಿಸಿದವರು. ಅವರ ಆಡು ಭಾಷೆಯಿಂದಲೇ ತತ್ವದ ಭೋದೆಗಳನ್ನು ಜನಸಾಮಾನ್ಯರಿಗೆ ಮನ ಮುಟ್ಟುವಂತೆ ಪದ್ಯಗಳನ್ನು ರಚಿಸಿ ಹಾಡುತ್ತಿದ್ದರು. ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದಿ ಜಾತಿ-ಜಾತಿಗಳ ನಡುವೆ ಇರುವ ದ್ವೇಷವನ್ನು ಅವರ ಪದಗಳಿಂದ ಅಳಿಸಿ ಅಲ್ಲಾಹ್ ಅಲ್ಲಮ ಒಂದೇ, ”ಬೋಕಿಯೊಳಗ ಹುಟ್ಟಿತ್ತು ಈ ಲೋಕವೆಲ್ಲ ಆ ಜಾತಿ ಈ ಜಾತಿ ಎಲ್ಲಿತ್ತೊ” ಎಂದು ಜಾತಿಭೇದದ ವಿಷಯದಲ್ಲಿ ಕೆಂಡದಂತಾಗುತ್ತಿದ್ದರು. 


      ಸರ್ವರಿಗೂ ಇಂತಹ  ಮಹಾನ್ ಸಂತ ಶ್ರೀಶಿಶುನಾಳ ಶರೀಫ್ ರ ಜನುಮದಿನದ ಹಾರ್ದಿಕ ಶುಭಾಶಯಗಳು.



No comments:

Post a Comment

ದೇ ಜವರೇಗೌಡ

  ದೇ ಜವರೇಗೌಡ ಅವರು ಬರಹಗಾರರಾಗಿ, ಉಪಕುಲಪತಿಗಳಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾಗಿದ್ದಾರೆ. ದೇ ಜವರೇಗೌಡ ಅವರು ಬೆಂಗಳೂರು ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ...